ದೂರದರ್ಶನದಲ್ಲಿ ಭಗವದ್ಗೀತೆ-ಸಂವಾದ
Posted date: 28 Wed, Mar 2012 ? 10:10:44 AM

ಶ್ರೀದೇವಿ ಕ್ರಿಯೇಷನ್ಸ್  ಸಂಸ್ಥೆಯ ಭಗವದ್ಗೀತೆ ಪ್ರವಚನ ಕಾರ್ಯಕ್ರಮ ಬೆಂಗಳೂರು ದೂರದರ್ಶನದಲ್ಲಿ  ಪ್ರತಿ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಬೆಳಿಗ್ಗೆ ೮ ರಿಂದ ೮.೩೦ ರವರೆಗೆ  ಪ್ರಸಾರವಾಗುತ್ತಿದೆ.  ಈಗಾಗಲೇ ೬೦೦ ಸಂಚಿಕೆಗಳನ್ನು ಪೂರೈಸಿ ಸಾವಿರ ಸಂಚಿಕೆಯತ್ತ ಮುನ್ನುಗ್ಗುತ್ತಿದೆ.  ನಿತ್ಯ ನೂತನ ಸತ್ಯ ಚೇತನ ಶ್ರವಣ ಸೌರಭವೇ ಭಗವದ್ಗೀತೆ ಆತ್ಮಾನಂದಕ್ಕೆ ಮೋಕ್ಷ, ಸಾಧನಕ್ಕೆ ಮಾಧವ ನುಡಿದ ಅಮೃತವಾಣಿಯೇ ಭಗವದ್ಗೀತೆ.  ದೇಶ ವಿದೇಶಗಳಲ್ಲಿಯ ಭಗದ್ಗೀತೆಯ ಅಭಿಮಾನಿ ವೀಕ್ಷಕರನ್ನು ಹೊಂದಿದೆ.  ಖ್ಯಾತ ವಿದ್ವಾನ್ ಪಾವಗಡ ಪ್ರಕಾಶ್‌ರಾವ್‌ರವರು ಭಗದ್ಗೀತೆಯ ಬಗ್ಗೆ ಅತ್ಯಂತ ಸರಳವಾಗಿ ಸ್ಪಷ್ಟವಾಗಿ ಮನದಟ್ಟಾಗುವಂತೆ ತಮ್ಮ  ವಾಕ್ ಚತುರ್ಯದಿಂದ  ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಭಗದ್ಗೀತೆಯ ಬಗ್ಗೆ ಅನೇಕರಿಗೆ ಗೊಂದಲ ಹಾಗೂ ಸಂದೇಹಗಳಿಗೆ ಇವರ ಪ್ರಶ್ನೆಗಳಿಗೆ  ಪಾವಗಡ ಪ್ರಕಾಶ್ ರವರು ಸಮಂಜಸವಾದ ಉತ್ತರವನ್ನು ನೀಡುತ್ತಿದ್ದಾರೆ. ಈ ಕಾರ್ಯಕ್ರಮವೇ ಭಗವದ್ಗೀತ ಸಂವಾದ.  ಇದು ಪ್ರತಿ ಭಾನುವಾರ ರಾತ್ರಿ ೮ ಗಂಟೆಗೆ ಚಂದನದಲ್ಲಿ ಪರಸಾರವಾಗಲಿದೆ.  ಅಯ್ಯಂಗಾರ್ ಹೋಂ ಪ್ರಾಡಕ್ಟ್‌ನ ಸಂಸ್ಥೆಯ ಬಿ.ಕೆ. ದ್ವಾರಕನಾಥ ನಿರ್ಮಿಸುತ್ತಿದ್ದು ಈ ಭಗದ್ಗೀತೆಯ  ಸಾರವನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿ ಮನೆ ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ಕೆ. ಪುರುಷನಾಥ್. ರವಿ ಮತ್ತು ಶ್ರೀನಿವಾಸ ನಾಡಿಗ್ ಛಾಯಾಗ್ರಹಣ  ಹಾಗೂ ಸಂಕಲನ, ಮಾರುತಿ ಮೀರಜ್‌ಕರ್ ಸಂಗೀತ, ಚಿಂದೋಡಿ ಬಂಗಾರೇಶ್ ಸಾಹಿತ್ಯ, ಎಸ್. ಪಿ. ಬಾಲಸುಬ್ರಮಣ್ಯಂ  ಹಾಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed